ಶ್ರೀ ಪ್ರಭುಲಿಂಗೇಶ್ವರ ಜಾತ್ರಾ ಹುಣಸಿ ಹಡಗೀಲ

ಪರಮ  ಪೂಜ್ಯ ಶ್ರೀ ಪ್ರಭುಲಿಂಗೇಶ್ವರ ಪ್ರಸನ್ನ 

ಪರಮ  ಪೂಜ್ಯ ಶ್ರೀ ಬಸವಲಿಂಗ ಮುತ್ಯಾ ಪ್ರಸನ್ನ 
Shri Basavalinga Muttya Hunasi Hadagil

ಎಲ್ಲರಿಗೂ ಹೊಸ ವರ್ಷದ ಹಾಗೂ ಉಗಾದಿ ಹಬ್ಬದ ಹಾರ್ದಿಕ ಸುಭಾಶಯಗಳು. 

ಶ್ರೀ ಪ್ರಭುಲಿಂಗೇಶ್ವರ ಜಾತ್ರಾ ಮೋಹೋತ್ಸವ ಗ್ರಾಮ ಹುಣಸಿ ಹಡಗೀಲ ಸುಮಾರು 5 ದಿನಗಳ ಪರ್ಯಂತ ನಡೆಯುವ ಈ ಜಾತ್ರಾ ಮೋಹೋತ್ಸವಕ್ಕೆ ಎಲ್ಲರಿಗೂ ಸ್ವಾಗತ. ಕಲ್ಬುರ್ಗಿ ಜಿಲ್ಲೆ ಇಂದ ಸುಮಾರು 20 ಕಿ ಮೀ ದೂರದಲ್ಲಿ ಇದೆ ಈ ಕ್ಷೇತ್ರ. ಸಾಕ್ಷಾತ್ ದೇವರು ಎಂದೇ ಹೆಸರುವಾಸಿಯಾದ ಪವಾಡ  ಪುರುಷ ಪರಮ ಪೂಜ್ಯ ಶ್ರೀ ಬಸವಲಿಂಗ ಮುತ್ಯಾ ಕಟ್ಟಿದ ಈ ಕ್ಷೇತ್ರ ಕಲ್ಲಿನ ನಾಡನ್ನು ಕೈಲಾಸವನ್ನಾಗಿ ಮಾಡಿದ ಸಾಕ್ಷಾತ್ ಶ್ರೀ ಬಸವಲಿಂಗ ಮುತ್ಯಾ ನಿಮಗೆ ಕೋಟಿ ಕೋಟಿ ವಂದನೆಗಳು.




Sharanbasveshwar Jatra

ಶ್ರೀ ಶರಣಬಸವೇಶ್ವರ
ಕಲಬುರಗಿ: ಹಿಂದು-ಮುಸ್ಲಿಂ ಭಾವೈಕ್ಯತೆಗೆ ಹೆಸರಾದ, ಕಾಯಕ ದಾಸೋಹ ಸಾರಿದ, ಐತಿಹಾಸಿಕ ಕಲಬುರಗಿಯ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಾತ್ರೆಗೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಜೇವರ್ಗಿ ತಾಲೂಕು ಅರಳಗುಂಡಗಿಯಲ್ಲಿ 1746 ರಲ್ಲಿ ಆದಯ್ಯಪ್ಪ ಮಡಿವಾಳಮ್ಮ ದಂಪತಿಗಳಿಗೆ ಜನಿಸಿದ ಶರಣಬಸವೇಶ್ವರರು, ಮಹಾದಾಸೋಹದೊಂದಿಗೆ ಭಕ್ತ ಸಂಕುಲದ ಕಷ್ಟಗಳನ್ನು ನಿವಾರಿಸಿ ಹೆಸರಾದವರು. ಜಾತಿ ಮತ ಬೇಧವಿಲ್ಲದೆ ಎಲ್ಲವನ್ನೂ ಮೀರಿ ಬೆಳೆದ ಶರಣ ಬಸವೇಶ್ವರರು, ಮಹಾನ್‌ ಪವಾಡ ಪುರುಷರಾಗಿ ಭಕ್ತರ ಏಳಿಗೆ ಮಾಡಿ ಭಕ್ತರ ಪಾಲಿಗೆ ಬೆಳಕಾದವರು.
ಶರಣಬಸವೇಶ್ವರರಿಗೆ ಎರಡು ಮುಖ ಯಾಕೆ?
ಸಾಮಾನ್ಯವಾಗಿ ಯಾವೂದೇ ದೇವರನ್ನು ನೋಡಿದರು ಒಂದು ಮುಖ ಇರುತ್ತೆ. ಆದರೆ ಕಲಬುರಗಿಯ ಶ್ರೀ ಶರಣಬಸವೇಶ್ವರರ ದೇವರಿಗೆ ಎರಡು ಮುಖಗಳಿರುವದು ವಿಶೇಷ. ಒಂದು ಮುಖ ಶರಣಬಸವೇಶ್ವರದ್ದಾಗಿದೆ. ಇನ್ನೊಂದು ಅವರ ಗುರುಗಳಾದ ಮರುಳಸಿದ್ದ ಶಿವಯೋಗಿ ಶಿವಾಚಾರ್ಯರದ್ದಾಗಿದೆ. 
ವಿಜಯಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಮರುಳಸಿದ್ದ ಶಿವಯೋಗಿ ಶಿವಾಚಾರ್ಯರು ಶರಣಬಸವೇಶ್ವರರ ಗುರುಗಳಾಗಿದ್ದರು. ಈ ಗುರು ಶಿಷ್ಯರು ಒಂದೆ ದಿನ ಲಿಂಗೈಕ್ಯರಾದ ಕಾರಣ ಒಂದೆ ಗದ್ದುಗೆ ನಿರ್ಮಿಸಲಾಗಿದೆ. ಅವರ ಗದ್ದುಗೆಗಳೆ ಇಂದಿನ ಶ್ರೀ ಶರಣಬಸವೇಶ್ವರರ ದೇವಸ್ಥಾನ.
ಗುರುಗಳನ್ನೇ ಮೀರಿ ಬೆಳೆದ ಶಿಷ್ಯ
ಶರಣಬಸವೇಶ್ವರರು ತಮ್ಮ ಗುರುಗಳನ್ನು ಮೀರಿ ಬೆಳೆದ ಶಿಷ್ಯರು ಎಂಬ ಹೆಗ್ಗಳಿಕೆ ಇದೆ. ತಮ್ಮ ಜೀವಮಾನದೂದ್ದಕ್ಕೂ ಮತ್ತೊಬ್ಬರ ಕಷ್ಟ ಕಾರ್ಪಣ್ಯಗಳನ್ನು ಹಂಚಿಕೊಂಡು, ಪವಾಡಗಳ ಮೂಲಕ ಭಕ್ತರ ನೋವಿಗೆ ನೆರವಾಗಿ, ಭಕ್ತ ಸಂಕುಲಕ್ಕೆ ಬೆಳಕಾದರು ಮಹಾನ್‌ ಪುರುಷ ಶರಣಬಸವೇಶ್ವರರು.
05/03/2018 ರಂದು ಉಚ್ಚಾಯಿ, 06/03/2018 ರಂದು ಜಾತ್ರಾ ಮಹೋತ್ಸವ
ಮಹಾದಾಸೋಹಿ ಶರಣಬಸವೇಶ್ವರರ 196ನೇ ಪುಣ್ಯತಿಥಿ ಹಾಗೂ ಪೀಠಾರೋಹಣ ಸ್ಮರಣಾರ್ಥ ಮಾ. 05 ರಂದು ಸಂಜೆ 6 ಗಂಟೆಗೆ ಉಚ್ಚಾಯಿ ಹಾಗೂ 06 ರಂದು ಸಂಜೆ 6 ಗಂಟೆಗೆ ಈಗಿನ ಪೀಠಾಧೀಪತಿ ಡಾ. ಶರಣಬಸವಪ್ಪ ಅಪ್ಪ ಅವರು ಪರುಶು ಬಟ್ಟಲು ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.